ಡಿ. ಕೆಂಪರಾಜ್ ಅರಸ್ (೧೯೧೭-೧೯೮೨) ಇವರು ಕನ್ನಡ ಚಲನಚಿತ್ರ ನಿರ್ದೇಶಕ, ನಟ ಮತ್ತು ನಿರ್ಮಾಪಕರಾಗಿದ್ದಾರೆ. ತಮಿಳು ಮತ್ತು ತೆಲುಗು ಚಲನಚಿತ್ರಗಳಲ್ಲೂ ಸಹ ಕೆಲಸ ಮಾಡಿದ್ದಾರೆ. == ಪ್ರಾರಂಭಿಕ ಜೀವನ == ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ತಾಲೂಕಿನ ಕಲ್ಲಳ್ಳಿಯಲ್ಲಿ ಇವರು ಜನಿಸಿದರು. ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾದ ಡಿ. ದೇವರಾಜ ಅರಸ್‌ ಅವರ ಸಹೋದರರಾಗಿದ್ದಾರೆ. == ವೃತ್ತಿ ಜೀವನ == ಹವ್ಯಾಸಿ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದ ಇವರು ಮೂರು ವರ್ಷಗಳ ಕಾಲ ವೈದ್ಯಕೀಯ ವ್ಯಾಸಂಗವನ್ನೂ ಮಾಡಿದ್ದರು.೧೯೪೨ರಲ್ಲಿ ಗುಬ್ಬಿ ವೀರಣ್ಣನವರು ನಿರ್ಮಿಸಿದ್ದ "ಜೀವನ ನಾಟಕ" ಎಂಬ ಚಲನಚಿತ್ರದಲ್ಲಿ ನಟನಾಗಿ ಚಿತ್ರರಂಗವನ್ನು ಪ್ರವೇಶಿಸಿದರು. ೧೯೫೧ರಲ್ಲಿ ಬಿಡುಗಡೆಯಾದ "ರಾಜಾ ವಿಕ್ರಮ" ಎಂಬ ಚಿತ್ರದಲ್ಲಿ ನಾಯಕ ನಟನಾಗಿ ನಟಿಸಿದ್ದಲ್ಲದೇ , ಈ ಚಿತ್ರದ ನಿರ್ದೇಶಿಸಿದದ್ದರೂ ಕೂಡ. ೧೯೪೮ರಲ್ಲಿ ಭಕ್ತ ರಾಮದಾಸ ಸಿನಿಮಾದಲ್ಲಿ ಬಾದಶಹನ ಪಾತ್ರ ನಿರ್ವಹಿಸುವ ಮೂಲಕ ಕೆಂಪರಾಜ ಅರಸ್ ಹೆಸರು ಪಡೆದಿದ್ದರು. == ರಾಜಕೀಯ ಕ್ಷೇತ್ರ == ಸಹೋದರ ದೇವರಾಜ್ ಅರಸ್ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದಾಗ ಕಾಂಗ್ರೆಸ್ ಪಕ್ಷದ ಸದಸ್ಯರಾಗಿ ರಾಜಕೀಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ೧೯೮೦ರಲ್ಲಿ ನಡೆದೆ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ನಡೆದ ಚುನಾವಣೆಯಲ್ಲಿ ಇಂದಿರಾ ಗಾಂಧಿಯವರ ಪರವಾಗಿ ಪ್ರಚಾರ ಮಾಡಿದರು. ೧೯೭೯ರಲ್ಲಿ ಕರ್ನಾಟಕ ಚಲನಚಿತ್ರ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ನೇಮಕಗೊಂಡರು. == ಚಲನಚಿತ್ರಗಳ ಪಟ್ಟಿ == == ಉಲ್ಲೇಖ ==